ಧನ್ಯಾ ರಾಮ್ಕುಮಾರ್ ಹೊಸ ಚಿತ್ರಕ್ಕೆ ಸಾಥ್ ನೀಡಿದ ಶ್ರೀಮುರಳಿ

ಧನ್ಯಾ ರಾಮ್ಕುಮಾರ್ ಅವರು ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಿದ್ದಾರೆ. ಹೊಸಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಎಲ್ಲಾ ನಿನಗಾಗಿ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಟೈಟಲ್ ಅನ್ನು ಶ್ರೀಮುರಳಿ ಅವರು ಅನಾವರಣ ಮಾಡಿದ್ದಾರೆ. ‘ಎಲ್ಲಾ ನಿನಗಾಗಿ’ ಚಿತ್ರಕ್ಕೆ ಕಾಶಿ ನಿರ್ದೇಶನ ಮಾಡುತ್ತಿದ್ದಾರೆ. ರಾಹುಲ್ ಅವರು ಧನ್ಯಾ ಜೊತೆ ನಟಿಸುತ್ತಿದ್ದಾರೆ.