ನಿಖಿಲ್ನನ್ನು ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನ ಮಾಡುತ್ತಾರೆ ಎಂದ ಹೆಚ್ಡಿ ಕುಮಾರಸ್ವಾಮಿ
ಹಾಸನಾಂಬೆ ದರ್ಶನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ವಿರೋಧ ಪಕ್ಷಗಳ ಕುತಂತ್ರಗಳ ಹೊರತಾಗಿಯೂ ಜನರು ನಿಖಿಲ್ನನ್ನು ಗೆಲ್ಲಿಸುತ್ತಾರೆ ಎಂದು ಹೇಳಿದ್ದಾರೆ. ಚನ್ನಪಟ್ಟಣದ ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನನ ಪಾತ್ರ ಕೊಡುತ್ತಾರೆ ಎಂದಿದ್ದಾರೆ.