ಇಂದು ಬಿಡುಗಡೆಯಾಗಿರುವ ವಿಡಿಯೋ ಕೂಡ ರೋಹಿತ್ ಕೊನೆಯ ಟೆಸ್ಟ್ ಪಂದ್ಯವನ್ನು ಆಡುತ್ತಿಲ್ಲ ಎಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ. ವಾಸ್ತವವಾಗಿ ಈ ವಿಡಿಯೋದಲ್ಲಿರುವ ಪ್ರಕಾರ, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಎಲ್ಲಾ ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ. ಇದೇ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಯುವ ಬ್ಯಾಟ್ಸ್‌ಮನ್ ಶುಬ್‌ಮಾನ್ ಗಿಲ್‌ನೊಂದಿಗೆ ಮಾತನಾಡಿ ಅವರ ಬೆನ್ನು ತಟ್ಟಿದ್ದಾರೆ.