ಒಂದೇ ವೇದಿಕೆಯಲ್ಲಿದ್ರೂ ಸಿಎಂ - ಡಿಸಿಎಂ ನಡುವೆ ಮಾತಿಲ್ಲ.. ಕತೆಯಿಲ್ಲ!

State Export Excellence Awards function in Bangalore: ಇಂದು ಶನಿವಾರ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರುಗಳು ಸಕ್ರಿಯರಾಗಿ ಭಾಗವಹಿಸಿದ್ದರು. ಆದರೆ ಗಮನಾರ್ಹವೆಂದರೆ ಒಂದೇ ವೇದಿಕೆಯಲ್ಲಿದ್ರೂ ಸಿಎಂ - ಡಿಸಿಎಂ ನಡುವೆ ಮಾತಿಲ್ಲ.. ಕತೆಯಿಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು! ಇದು ಅನೇಕರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ.