ನಟಿ ಲೀಲಾವತಿ ಅವರು ಮಗ ವಿನೋದ ರಾಜ್ಕುಮಾರ್ ಜೊತೆ ಬೆಂಗಳೂರಿನ ಹೊರವಲಯದಲ್ಲಿ ವಾಸವಾಗಿದ್ದಾರೆ. ಲೀಲಾವತಿ ಅವರನ್ನು ನೋಡಲು ಚಿತ್ರರಂಗದ ಅನೇಕರು ಆಗಾಗ ತೆರಳುತ್ತಾರೆ. ಈಗ ಹಿರಿಯ ನಟಿ ಉಮಾಶ್ರೀ ಅವರು ಲೀಲಾವತಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಬಗ್ಗೆ ವಿನೋದ್ ರಾಜ್ಕುಮಾರ್ ಅವರು ಮಾತನಾಡಿದ್ದಾರೆ. ‘ಉಮಾಶ್ರೀ ಅವರು ಬಂದಿದ್ದು ಅಮ್ಮನಿಗೆ ಖುಷಿ ಆಗಿದೆ. ನನ್ನ ಅಮ್ಮನ ಆಯಸ್ಸನ್ನು ಅವರು 10 ವರ್ಷ ಹೆಚ್ಚಿಸಿದರು’ ಎಂದಿದ್ದಾರೆ ವಿನೋದ್ ರಾಜ್ಕುಮಾರ್.