ಉಡುಪಿ: ಕೋಡಿ ಬೇಂಗ್ರೆಯಲ್ಲಿ ಬಲಗೆ ಬಿದ್ದ ರಾಶಿರಾಶಿ ಮೀನುಗಳು, ದಡದಲ್ಲಿದ್ದ ಮೀನುಗಳು ಸ್ಥಳೀಯರ ಪಾಲು

ಉಡುಪಿ, ಆಗಸ್ಟ್ 10: ಜಿಲ್ಲೆಯ ಕೋಡಿ ಬೇಂಗ್ರೆಯಲ್ಲಿ ಇಂದು ಮೀನುಗಾರರಿಗೆ ಪಂಪರ್ ಮೀನುಗಳು ಸಿಕ್ಕಿವೆ. ಸಮುದ್ರಕ್ಕೆ ಕೈರಂಪನಿ‌ ಬಲೆ ಹಾಕಿದ ಮೀನುಗಾರರಿಗೆ ಬಂಗುಡೆ, ಬೂತಾಯಿ ಸಹಿತ ರಾಶಿರಾಶಿ ಮೀನುಗಳು ಸಿಕ್ಕಿವೆ. ಭರ್ಜರಿ ಮತ್ಸ್ಯ ಭೇಟೆಯಿಂದ ಮೀನುಗಾರರು ಸಂತಸಗೊಂಡಿದ್ದು, ಬಲೆಗೆ ಬಿದ್ದ ರಾಶಿ ಮೀನುಗಳನ್ನು ನೋಡಲು ಕಡಲ ತಡಿಯ ನಿವಾಸಿಗಳು ದೌಡಾಯಿಸಿದ್ದಾರೆ. ಸಮುದ್ರದ ದಡದಲ್ಲಿದ್ದ ಮೀನುಗಳನ್ನು ಸ್ಥಳೀಯ ನಿವಾಸಿಗಳು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿಕೊಂಡು ಹೋಗಿದ್ದಾರೆ.