ಈ ವರ್ಷದ ಕೊನೆಯ ಸೂರ್ಯಾಸ್ತ

2024ಕ್ಕೆ ಗುಡ್ ಬಾಯ್ ಹೇಳಿ 2025ಕ್ಕೆ ಹಾಯ್ ಹೇಳುವ ಸಂದರ್ಭ ಬಂದಿದೆ. ಈ ಸಮಯದಲ್ಲಿ ಕೊಪ್ಪಳ ತಾಲ್ಲೂಕಿನ ಗಿಣಗೇರಿ ಕೆರೆಯ ಬಳಿ ಟಿವಿ9 ಕ್ಯಾಮರಾಮ್ಯಾನ್ ಮಾರುತಿ ಅವರು ಈ ವರ್ಷದ ಕೊನೆಯ ಸೂರ್ಯಾಸ್ತದ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ನಸುಗೆಂಪು ಬಣ್ಣದಲ್ಲಿ ಹೊಳೆಯುತ್ತಿದ್ದ ಸೂರ್ಯನು ನಿಧಾನವಾಗಿ ಅಡಗುವುದು ಮನಮೋಹಕ ದೃಶ್ಯ ಕಣ್ಮನ ಸೆಳೆಯುತ್ತದೆ.