ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ

ನವದೆಹಲಿ, ಮಾರ್ಚ್ 28: ಟಿವಿ9 ನೆಟ್‌ವರ್ಕ್‌ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT 2025) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟಿವಿ9 ನೆಟ್‌ವರ್ಕ್ ಅನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಈ ನೆಟ್‌ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು. ಟಿವಿ9 ನೆಟ್‌ವರ್ಕ್‌ನ ಎಲ್ಲಾ ವೀಕ್ಷಕರನ್ನು ಅಭಿನಂದಿಸಿದರು. 'ಟಿವಿ9 ನೆಟ್‌ವರ್ಕ್ ಮತ್ತು ನಿಮ್ಮ ಎಲ್ಲಾ ವೀಕ್ಷಕರನ್ನು ನಾನು ಸ್ವಾಗತಿಸುತ್ತೇನೆ ಮತ್ತು ಈ ಶೃಂಗಸಭೆಗೆ ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ನೆಟ್‌ವರ್ಕ್‌ನ ಜಾಗತಿಕ ಪ್ರೇಕ್ಷಕರು ಸಹ ಸಿದ್ಧರಾಗುತ್ತಿದ್ದಾರೆ. ನಾನು ಇಲ್ಲಿ ಹಲವು ದೇಶಗಳ ಜನರನ್ನು ಸಹ ನೋಡುತ್ತಿದ್ದೇನೆ. ಎಲ್ಲರಿಗೂ ಶುಭ ಹಾರೈಸುತ್ತೇನೆ' ಎಂದು ಮೋದಿ ಹೇಳಿದ್ದಾರೆ.