ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ 3 ಕಾಲೇಜು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಕ್ಕಾಗಿ ತರಗತಿಯೊಳಗೇ ಶಿಕ್ಷಕರಿಗೆ ಬರ್ಬರವಾಗಿ ಇರಿದಿದ್ದಾರೆ. ಈ ಭೀಕರ ಘಟನೆ ತರಗತಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೂವರು ವಿದ್ಯಾರ್ಥಿಗಳು ಪ್ಲಾನ್ ಮಾಡಿ ಶಿಕ್ಷಕರಿಗೆ ಚಾಕುವಿನಿಂದ ಇರಿದಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ.