ಕಾಂಗ್ರೆಸ್​ ಮುಖಂಡನಿಗೆ ಡಿ.ಕೆ.ಶಿವಕುಮಾರ್ ಕಪಾಳಮೋಕ್ಷ

ಹಾವೇರಿ ಜಿಲ್ಲೆಯ ಸವಣೂರಿಗೆ ಕಾಂಗ್ರೆಸ್​ ಅಭ್ಯರ್ಥಿ ‌ವಿನೋದ್ ಅಸೂಟಿ ಪರ ಪ್ರಚಾರಕ್ಕೆ ಬಂದಿದ್ದಾಗ ಹೆಗಲ ಮೇಲೆ ಕೈಹಾಕಿದ್ದಕ್ಕೆ ಕಾಂಗ್ರೆಸ್​ ಮುಖಂಡನಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಪಾಳಮೋಕ್ಷ ಮಾಡಿದ್ದಾರೆ. ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಪುರಸಭೆ ಸದಸ್ಯ ಅಲ್ಲಾವುದ್ದೀನ್ ಮನಿಯಾರ್​ ಡಿಕೆ ಶಿವಕುಮಾರ್ ಹೆಗಲ ಮೇಲೆ ಕೈಹಾಕಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಡಿಕೆ ಶಿವಕುಮಾರ್ ಮುಖಂಡನ ಕಪಾಳಕ್ಕೆ ಹೊಡೆದಿದ್ದಾರೆ.