ಆಪರೇಷನ್.. ರಾಜ್ಯ ರಾಜಕಾರಣದಲ್ಲಿ ಕೇಳಿಬರ್ತಿರುವ ಒಂದೇ ಒಂದು ಹೆಸರು ಆಪರೇಷನ್ ಹಸ್ತ.. ಬಿಜೆಪಿ, ಜೆಡಿಎಸ್ನ ಘಟಾನುಘಟಿ ನಾಯಕರಿಗೆ ಗಾಳ ಹಾಕಿರುವ ಕಾಂಗ್ರೆಸ್ ನಾಯಕರು, ಈಗಾಗಲೇ ಪಕ್ಷದ ಬಾಗಿಲು ತೆರೆದಿಟ್ಟು ಬಂದವರಿಗೆಲ್ಲ ಆರತಿ ಎತ್ತಿ ಬರಮಾಡಿಕೊಳ್ತಿದ್ದಾರೆ. ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಮತ ಬುಟ್ಟಿ ಭದ್ರಗೊಳಿಸಿಕೊಳ್ಳಲು ಶತಾಯಗತಾಯ ಹರಸಾಹಸ ಪಡ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಲು ಟಾರ್ಗೆಟ್ ನೀಡಿದೆಯಂತೆ. ಹೀಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪಕ್ಷ ಸೇರುವವರಿಗೆ ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.