ಕೆಆರ್ ಸ್ಪತ್ರೆಯಲ್ಲಿ ವ್ಹೀಲ್ ಚೇರ್ ಇಲ್ಲದೆ ಪರದಾಟ

ನೂರಾರು ಕೋಟಿ ರೂಪಾಯಿ ಅನುದಾನ ನೀಡಿದ್ದರೂ ಸಿಎಂ ಸಿದ್ದರಾಮಯ್ಯ ತವರು ಮೈಸೂರಿನ ಕೆಆರ್​​ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇರುವ ಒಂದು ವ್ಹೀಲ್​ ಚೇರ್​ಗೆ ಆಸ್ಪತ್ರೆ ಸಿಬ್ಬಂದಿ ಬೀಗ ಹಾಕಿಟ್ಟಿದ್ದರಿಂದ ವೃದ್ಧೆಯೊಬ್ಬರನ್ನು ಸಂಬಂಧಿಕರು ಪ್ಲಾಸ್ಟಿಕ್ ಚೇರ್​​ನಲ್ಲೇ ಕರೆದೊಯ್ದ ವಿಡಿಯೋ ಈಗ ವೈರಲ್ ಆಗುತ್ತಿದೆ.