ಎಐ ಆ್ಯಪ್​ಗಳ ಲೋಪ ಎತ್ತಿತೋರಿಸಿದ ಮೋದಿ

ಪ್ಯಾರಿಸ್ ಎಐ ಆ್ಯಕ್ಷನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುತೂಹಲ ಮೂಡಿಸುವ ಒಂದು ವಿಷಯ ಪ್ರಸ್ತಾಪಿಸಿದರು. ಈಗಿರುವ ಎಐ ಆ್ಯಪ್​ಗಳಲ್ಲಿ ಟ್ರೈನ್ ಮಾಡಲಾಗಿರುವ ಡಾಟಾ ಹೇಗೆ ಪೂರ್ವಗ್ರಹದಿಂದ ಕೂಡಿವೆ ಎಂಬುದನ್ನು ಎತ್ತಿತೋರಿಸಿದ್ದಾರೆ. ಎಐ ಆ್ಯಪ್​ಗಳು ಎಡಗೈನಲ್ಲಿ ಬರೆಯುತ್ತಿರುವ ವ್ಯಕ್ತಿಯ ಚಿತ್ರವನ್ನು ಜನರೇಟ್ ಮಾಡುವುದಿಲ್ಲ ಎಂದಿದ್ದಾರೆ.