ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು

ಹಳೇದೋಸ್ತಿ ಮತ್ತು ಮಾಜಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಶ್ರೀರಾಮುಲು ಅದು ಕಾನೂನು ಪ್ರಕ್ರಿಯೆ, ಕೋರ್ಟ್​​ ಶಿಕ್ಷೆ ವಿಧಿಸಿದ ಬಳಿಕ ಜನಾರ್ಧನ ರೆಡ್ಡಿಯವರು ಅದನ್ನು ಪ್ರಶ್ನಿಸಿ ಹೈಕೋರ್ಟ್​ ಮೊರೆ ಹೋಗಿದ್ದರು, ಹೈಕೋರ್ಟ್ ಶಿಕ್ಷೆಯನ್ನು ತಡೆಹಿಡಿದಿದೆ ಎಂದು ಹೇಳಿದರು.