ಮಹಾಕುಂಭದಲ್ಲಿ 45 ದಿನದಲ್ಲಿ 66 ಕೋಟಿಗೂ ಹೆಚ್ಚು ಭಕ್ತರಿಂದ ಪುಣ್ಯ ಸ್ನಾನ

ಜನವರಿ 13ರಂದು ಪ್ರಾರಂಭವಾದ ಮಹಾಕುಂಭ ಮೇಳ ಮಹಾ ಶಿವರಾತ್ರಿಯ ದಿನವಾದ ಇಂದು ಕೊನೆಗೊಂಡಿದೆ. ಮಹಾಕುಂಭ ಮೇಳದಲ್ಲಿ ಒಟ್ಟು ಸ್ನಾನ ಮಾಡುವವರ ಸಂಖ್ಯೆ ಚೀನಾ ಮತ್ತು ಭಾರತವನ್ನು ಹೊರತುಪಡಿಸಿ ಎಲ್ಲಾ ದೇಶಗಳ ಜನಸಂಖ್ಯೆಯನ್ನು ಮೀರಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ. ಮಹಾಶಿವರಾತ್ರಿಯ ದಿನವಾದ ಇಂದು 1.44 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.