ಪ್ರಶಾಂತ್ ಕಿಶೋರ್​ ಜತೆ ವೇದಿಕೆ ಹಂಚಿಕೊಂಡ ನಟ ದಳಪತಿ ವಿಜಯ್

ರಾಜಕೀಯ, ಸಿನಿಮಾ ರಂಗ ಒಂದಕ್ಕೊಂದು ಬಿಡಿಸಲಾಗದ ನಂಟು ಹೊಂದಿರುವ ತಮಿಳುನಾಡಿನಲ್ಲಿ ಸಿನಿಮಾ ಹಿನ್ನೆಲೆಯ ಮತ್ತೊಬ್ಬ ನಟ ದಳಪತಿ ವಿಜಯ್ ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಇಂದಿಗೆ ಒಂದು ವರ್ಷ. ಖ್ಯಾತ ನಿರ್ದೇಶಕ ಎಸ್‌.ಎ. ಚಂದ್ರಶೇಖರ್ ಅವರ ಪುತ್ರ ಹಾಗೂ ಸೂಪರ್‌ ಸ್ಟಾರ್ ದಳಪತಿ ವಿಜಯ್ ಹೊಸ ರಾಜಕೀಯ ಪಕ್ಷ (ತಮಿಳಗ ವೆಟ್ರಿ ಕಳಗಂ) ಘೋಷಣೆ ಮಾಡುವ ಮೂಲಕ ಪ್ರಾದೇಶಿಕ ಪಕ್ಷಗಳೇ ವಿಜೃಂಭಿಸುತ್ತಿರುವ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಆಖಾಡವನ್ನು ಸಜ್ಜುಗೊಳಿಸಿದ್ದರು.