ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಯಾವುದೇ ಸಭೆ ಸಮಾರಂಭದಲ್ಲಿ ತಮ್ಮನ್ನು ಹಾರ ತುರಾಯಿಗಳಿಂದ ಸನ್ಮಾನಿಸುವುದು ಬೇಡ ಅಂತ ಹೇಳಿದ್ದರು. ಆದರೆ ಅವರು ಎಲ್ಲಿ ಹೋದರೂ ಹೂವಿನ ಹಾರ ಮತ್ತು ಬೋಕೆಗಳಿಂದ ಸನ್ಮಾನಿಸಲಾಗುತ್ತದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರೂ ಇದೇ ಮಾತು ಹೇಳಿದ್ದರು.