ಇಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತಾಡಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಸಹ ಪಹಲ್ಲಾಮ್ ಉಗ್ರರ ದಾಳಿ ಹಿನ್ನಲೆಯಲ್ಲಿ ಕಾಂಗ್ರೆಸ್ ನಿಲುವಿನ ಬಗ್ಗೆ ಕೇಳಿದಾಗ ಅಗತ್ಯವಿರುವಷ್ಟು ಮಾತ್ರ ಹೇಳಿದ್ದರು. ಅವರ ಅಳಿಯನಾಗಿರುವ ಡಾ ಮಂಜುನಾಥ್ ಸಹ ಅನಾವಶ್ಯಕ ಮಾತುಗಳನ್ನು ಹೇಳಲಿಲ್ಲ. ಅವರು ಹೇಳಿದಂತೆ, ಉಗ್ರರನ್ನು ಮಟ್ಟ ಹಾಕುವುದು ಮತ್ತು ಪಾಕಿಸ್ತಾನಕ್ಕೆ ಪಾಠ ಕಲಿಸುವುದು ಸಮಯದ ಕರೆಯಾಗಿದೆ.