ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಬಳಿ ನಡೆದ ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ ಕಾಡಾನೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸಪಟ್ಟು ಒಂಟಿ ಕಾಡಾನೆಯನ್ನು ಸೆರೆ ಹಿಡಿದರು. ಅರವಳಿಕೆ ಮದ್ದನ್ನು ಬಳಸಿ ಕಾಡಾನೆಯನ್ನು ನಿಶ್ಚೇಷ್ಟಿತಗೊಳಿಸಿ, ಸಾಕಾನೆಗಳ ಸಹಾಯದಿಂದ ಸೆರೆಹಿಡಿಯಲಾಯಿತು.