ಗೃಹ ಸಚಿವ ಪರಮೇಶ್ವರ್ ತವರು ಜಿಲ್ಲೆಯಲ್ಲಿ ಸೋರುತಿಹುದು ಪೊಲೀಸ್ ಠಾಣೆ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ತವರು ಜಿಲ್ಲೆಯ ಪೊಲೀಸ್ ಠಾಣೆ ಮಳೆಗೆ ಸೋರುತ್ತಿದೆ. ತುಮಕೂರು ನಗರದ ಜಯನಗರ ಪೊಲೀಸ್ ಠಾಣೆಯ ಪರಿಸ್ಥಿತಿ ಕಂಡು ಸಾರ್ವಜನಿಕರು ಮರುಗಿದ್ದಾರೆ. ಸುಸಜ್ಜಿತವಾದ ಕಟ್ಟಡವಿಲ್ಲದೆ ನಗರದ ಜಯನಗರ ಪೊಲೀಸರು ಪರದಾಡುತ್ತಿದ್ದಾರೆ.