‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್​ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್

ರಜತ್ ಅವರು ಬಿಗ್ ಬಾಸ್​ ಮನೆಗೆ ಕಾಲಿಟ್ಟ ದಿನದಿಂದಲೂ ಮಾತಿನ ಮೂಲಕ ಎಲ್ಲರನ್ನೂ ಕೆಣಕುತ್ತಿದ್ದಾರೆ. ಈಗ ಅವರಿಗೆ ಉಗ್ರಂ ಮಂಜು ಟಾರ್ಗೆಟ್​ ಆಗಿದ್ದಾರೆ. ಮಂಜುಗೆ ರೋಗಿಷ್ಟ ಎಂದು ರಜತ್ ಹೇಳಿದ್ದಾರೆ. ನವೆಂಬರ್​ 28ರ ಸಂಚಿಕೆಯಲ್ಲಿ ಈ ವಿಷಯ ಪ್ರಸಾರ ಆಗಲಿದೆ. ‘ಕಲರ್ಸ್​ ಕನ್ನಡ’ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ರಜತ್​ಗೆ ವಾರಾಂತ್ಯದಲ್ಲಿ ಸುದೀಪ್​ ಕ್ಲಾಸ್ ತೆಗೆದುಕೊಳ್ಳಬಹುದು.