ನಟಿ ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಲ್ಲಿನ ಟಫ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಪುರುಷ ಸ್ಪರ್ಧಿಗಳಿಗೂ ಕಠಿಣ ಪೈಪೋಟಿ ನೀಡುವ ಮೂಲಕ ಅವರು ಕಿಚ್ಚನ ಚಪ್ಪಾಳೆ ಗಿಟ್ಟಿಸಿದ್ದಾರೆ. ಆ ಕಾರಣದಿಂದಲೇ ಅವರ ಮೇಲೆ ಎಲ್ಲರೂ ನಂಬಿಕೆ ಇದ್ದಾರೆ. ಆದರೆ 5ನೇ ವಾರದಲ್ಲಿ ಆ ನಂಬಿಕೆಗೆ ಪೆಟ್ಟು ಬಿದ್ದಿದೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಸಂಗೀತಾ ಶೃಂಗೇರಿ ಎಡವಿದ್ದಾರೆ. ಇದರ ಝಲಕ್ ತೋರಿಸುವ ಪ್ರೋಮೋ ಬಿಡುಗಡೆ ಆಗಿದೆ. ‘ನನ್ನ ಪರವಾಗಿ ಸಂಗೀತಾ ಆಡುತ್ತಾರೆ’ ಎಂದು ಭಾಗ್ಯಶ್ರೀ ಹೇಳಿದ್ದಾರೆ. ಅಷ್ಟರಮಟ್ಟಿಗೆ ಎಲ್ಲರೂ ಸಂಗೀತಾ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ಆ ಟಾಸ್ಕ್ ನಿಭಾಯಿಸುವಲ್ಲಿ ಸಂಗೀತಾ ಸೋತಿದ್ದಾರೆ. ತಮ್ಮ ಕೈಯಿಂದ ಸ್ವಲ್ಪವೂ ಮಾಡಲು ಸಾಧ್ಯವಾಗಲಿಲ್ಲ ಎಂದು ಎಲ್ಲರ ಎದುರು ಸಂಗೀತಾ ಕಣ್ಣೀರು ಹಾಕಿದ್ದಾರೆ. ಈ ಸಂಚಿಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನವೆಂಬರ್ 10ರ ರಾತ್ರಿ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ಲೈವ್ ನೋಡಬಹುದು.