ಗುಡಿಯ ಆವರಣದಲ್ಲಿ ಕುಮಾರಸ್ವಾಮಿಯವರು ತಾಯಂದಿರೊಂದಿಗೆ ಬಂದಿದ್ದ ಮಕ್ಕಳ ಕೆನ್ನೆ ತಟ್ಟಿ, ತಲೆ ನೇವರಿಸಿ ಪ್ರೀತಿ ವ್ಯಕ್ತಪಡಿಸಿದರು. ಮಂಡ್ಯ ಲೋಕಸಭಾ ಕ್ಷೇತ್ರ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಗೆದ್ದೇ ತೀರಬೇಕೆಂಬ ಛಲ ಕುಮಾರಸ್ವಾಮಿಯವರಲ್ಲಿದ್ದರೆ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಸಂಕಲ್ಪ ಮಾಡಿಕೊಂಡಿದ್ದಾರೆ.