ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಮತ್ತು ಮೇಲಿನ ಎರಡು ಮಹಡಿಗಳನ್ನು ಐಟಿ ಕಂಪನಿಯೊಂದಕ್ಕೆ ಬಾಡಿಗೆ ಕೊಡಲಾಗಿತ್ತಂತೆ. ಇಲ್ಲಿ ಉದ್ಭವಿಸುವ ಸಮಸ್ಯೆಯೇನೆಂದರೆ, ಇಷ್ಟು ದೊಡ್ಡ ಕಟ್ಟಡದಲ್ಲಿ ಫೈರ್ ಸೇಫ್ಟಿಗಾಗಿ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರಲಿಲ್ಲವೇ ಅನ್ನೋದು. ಶಂಕರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ತನಿಖೆಯ ಬಳಿಕವೇ ದುರಂತದ ಹಿಂದಿನ ಕಾರಣ ಬೆಳಕಿಗೆ ಬರಬೇಕು.