ಶನಿವಾರ ಬಂತು: ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್ ಬಗ್ಗೆ ಮೂಡಿದೆ ಕುತೂಹಲ

ವೀಕೆಂಡ್ ಬಂದೇ ಬಿಟ್ಟಿದೆ. ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್ ನೋಡೋಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಬಿಗ್ ಬಾಸ್ನಲ್ಲಿ ವಿನಯ್, ಸಂತೋಷ್ ಸೇರಿದಂತೆ ಅನೇಕರು ನಾಮಿನೇಟ್ ಆಗಿದ್ದಾರೆ. ಈ ಪೈಕಿ ಒಬ್ಬರು ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಅವರು ಯಾರು ಎನ್ನುವ ಕುತೂಹಲ ವೀಕ್ಷಕರಿಗೆ ಮೂಡಿದೆ. ಇದರ ಜೊತೆ ವಾರದ ಕಥೆಯನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ವಾರ ಹಲವು ಘಟನೆಗಳು ನಡೆದಿವೆ. ವಿನಯ್ಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಜಿಯೋ ಸಿನಿಮಾದಲ್ಲಿ ಲೈವ್ ಹಾಗೂ ಎಪಿಸೋಡ್ ವೀಕ್ಷಿಸಬಹುದು.