ಇವತ್ತು ಬೆಂಗಳೂರಲ್ಲಿ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸಿಂಗ್ ನಡೆಸಿದ ಬಳಿಕ ಮಾದ್ಯಮ ಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ ತಿಂಗಳಲ್ಲಿ ಈ ಸಲ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ, ನಾನಾ ಭಾಗಗಳಲ್ಲಿ ರೈತರು ಬಿತ್ತನೆ ಕೆಲಸ ಆರಂಭಿಸಿದ್ದಾರೆ, ಬಿತ್ತನೆ ಬೀಜಗಳ ಬಗ್ಗೆ ರೈತರು ಆತಂಕಪಡಬೇಕಿಲ್ಲ, ಸಾಕಷ್ಟು ಪ್ರಮಾಣದಲ್ಲಿ ಅವು ಲಭ್ಯವಿವೆ ಎಂದರು.