ಐಪಿಎಲ್, ಚುನಾವಣೆ ಅಬ್ಬರದ ನಡುವೆಯೂ ‘ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಆಗಿದ್ದಕ್ಕೆ ಕಾರಣ ನೀಡಿದ ಜಗ್ಗೇಶ್

‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಚುನಾವಣೆ ಹಾಗೂ ಐಪಿಎಲ್ ಅಬ್ಬರ ಜೋರಾಗಿದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ಮಾಡೋಕೆ ಅನೇಕರು ಧೈರ್ಯ ತೋರಿಸುತ್ತಿಲ್ಲ. ಆದಾಗ್ಯೂ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ರಿಲೀಸ್ ಆಗಿದ್ದು ಏಕೆ ಎನ್ನುವ ಪ್ರಶ್ನೆಗೆ ಜಗ್ಗೇಶ್ ಉತ್ತರ ನೀಡಿದ್ದಾರೆ. ‘ಕಂಟೆಟ್ ಬಗ್ಗೆ ನಿರ್ಮಾಪಕರಿಗೆ ಧೈರ್ಯ ಇತ್ತು. ಹೀಗಾಗಿ, ಸಿನಿಮಾ ರಿಲೀಸ್ ಮಾಡಿ ಎಂದರು’ ಎಂಬುದು ಜಗ್ಗೇಶ್ ಮಾತು.