Bidar Centenary School: ಸ್ಟುಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಅಂತಾರೆ ಆದ್ರೆ ಈ ಶಾಲೆಯ ವಿದ್ಯಾರ್ಥಿನಿಯರಿಗೆ ಆ ಭಾಗ್ಯ ಮರೀಚಿಕೆಯಾಗಿದೆ. ಮಳೆಯಾದರೆ ಸೋರುವ, ಅಲ್ಲಲ್ಲಿ ಬಿರುಕು ಬಿಟ್ಟಿರುವ ಶಿಥಿಲಗೊಂಡ ಕಟ್ಟಡವೇ ಈ ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ಕಲಿಕೆಯ ತಾಣವಾಗಿದೆ. 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುವ ಈ ಶಾಲೆ ಸೋರುತ್ತಿದ್ದು ವಿದ್ಯಾರ್ಥಿನಿಯರನ್ನ ಹೈರಾಣಾಗಿಸಿದೆ. ಶಿಥಿಲಾವಸ್ಥೆ ತಲುಪಿದ ಶತಮಾನದ ಸರಕಾರಿ ಕನ್ಯಾ ಪ್ರೌಢ ಶಾಲೆ...ಶತಮಾನಗಳಷ್ಟು ಹಳೆಯದಾದ ನವಾಬರ ಕಾಲದ ಕಟ್ಟಡದಲ್ಲಿಯೇ ವಿದ್ಯಾರ್ಥಿನಿಯರ ಓದು. ಹೌದು ಒಂದೂವರೆ ವರ್ಷದ ಹಿಂದೆ ನಿಜಾಮರ ಆಡಳಿತದಲ್ಲಿ ನಿರ್ಮಾಣಗೊಂಡಿರುವ ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಸರಕಾರಿ ಬಾಲಕಿಯರ ಪ್ರೌಢ ಶಾಲೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ವಿದ್ಯಾರ್ಥಿನಿಯರು ಜೀವ ಭಯದಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ರಾಜಕಾಣಿಗಳು ಇಚ್ಚಾಶಕ್ತಿಯ ಕೊರತೆಯಿಂದಾ ಪುರಾತನ ಪಾರಂಪರಿಕ ಕಟ್ಟಡ ಅಭಿವೃದ್ಧಿ ಕಾಣದೆ ಸೊರಗುತ್ತಿದೆ. ಸುಮಾರು 18 ಕೋಣೆಗಳು ಇಲ್ಲಿದ್ದು ಸುಮಾರು 12 ಕೋಣೆಗಳು ಸಂಪೂರ್ಣ ಕುಸಿದುಹೋಗಿದ್ದು ಇನ್ನುಳಿದ 6 ಆರು ಕೋಣೆಗಳು ಶಿಥಾಲವಸ್ಥೆಯಿದ್ದರೂ ಕೂಡಾ ಅಲ್ಲಿಯೇ ವಿದ್ಯಾರ್ಥಿನಿಯರಿಗೆ ಪಾಠ ಮಾಡಲಾಗುತ್ತಿದೆ.