ಮಹಾ ಶಿವರಾತ್ರಿ: ಹೂ, ಹಣ್ಣು, ತರಕಾರಿಗಳಿಂದ ಮಾದಪ್ಪನ ದೇಗುಲ ಅಲಂಕಾರ

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿಜೃಂಭಣೆಯ ಜಾತ್ರೆ ನಡೆಯುತ್ತಿದೆ. ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆಯಲು ಆಗಮಿಸಿದ್ದಾರೆ. ಮಾದಪ್ಪನ ದೇಗುಲವನ್ನು ಅಲಂಕರಿಸಲಾಗಿದ್ದು, ವಿವಿಧ ಪೂಜೆಗಳು ನಡೆಯುತ್ತಿವೆ. ಉರುಳು ಸೇವೆ, ಪಂಜಿನ ಸೇವೆ, ಹುಲಿ ವಾಹನ, ಬಸವ ವಾಹನ ಮುಂತಾದ ಉತ್ಸವಗಳು ಜರುಗುತ್ತಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ಜಾತ್ರೆ ಮಹತ್ವದ ಧಾರ್ಮಿಕ ಕಾರ್ಯಕ್ರಮವಾಗಿದೆ.