ಕುಡಿತದ ಮತ್ತಿನಲ್ಲಿ ಬಾರ್‌ನಲ್ಲಿ ಯುವಕರ ಮಧ್ಯೆ ಮಾರಾಮಾರಿಯಾಗಿದೆ. ಮಂಗಳೂರಿನ ಕೊಟ್ಟಾರ ಬಳಿಯ ಕೋಸ್ಟಲ್ ಬಾರ್ ನಲ್ಲಿ ಬಿಯರ್ ಬಾಟಲಿ ಹಾಗೂ ಸೋಡಾ ಬಾಟಲಿಗಳಿಂದ ಯುವಕರು ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಕೆಲ ಯುವಕರಿಗೆ ಗಂಭೀರ ಗಾಯಗಳಾಗಿದ್ದು ಹಲ್ಲೆಯ ದೃಶ್ಯಗಳು ಬಾರ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.