ದೇವನಹಳ್ಳಿ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ. ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಚಿನ್ನ ಜಪ್ತಿ. ಪೌಡರ್ ರೂಪದಲ್ಲಿ ಚಿನ್ನವನ್ನ ಪೇಸ್ಟ್ ಮಾಡಿ ಪ್ಯಾಂಟ್ ಒಳಗಡೆ ಮರೆಮಾಚಿದ್ದ ಆರೋಪಿ. ವಿದೇಶದಿಂದ ಬಂದ ಪ್ರಯಾಣಿಕನಿಂದ ಜಪ್ತಿ. ಕೊಲಂಬೊದಿಂದ ಶ್ರೀಲಂಕಾ ಏರ್ಲೈನ್ಸ್ನಲ್ಲಿ ಬಂದಿದ್ದ ಪ್ರಯಾಣಿಕ. ಅಧಿಕಾರಿಗಳ ಕಣ್ತಪ್ಪಿಸಲು 74 ಗ್ರಾಂ ಚಿನ್ನ ಅಕ್ರಮವಾಗಿ ಸಾಗಾಟ ವೇಳೆ ವಶ. ಆರೋಪಿ ಸಮೇತ ಚಿನ್ನವನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.