ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ

ಯುವತಿಯ ಬ್ಯಾಗ್ ಕದಿಯಲು ಹೋಗಿ ಕಳ್ಳ ತನ್ನ ಜೀವಕ್ಕೇ ಕುತ್ತು ತಂದುಕೊಂಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅದು ರಾತ್ರಿ ಸಮಯ ಇಬ್ಬರು ಯುವತಿಯರು ಹಾಗೂ ಒಬ್ಬ ವ್ಯಕ್ತಿ ಮಾತನಾಡುತ್ತಾ ನಿಂತಿರುತ್ತಾರೆ. ಆಗ ಹಿಂದಿನಿಂದ ಬಂದ ಕಳ್ಳ ಯುವತಿಯೊಬ್ಬಳ ಬ್ಯಾಗ್ ಕದಿಯಲು ಪ್ರಯತ್ನಿಸುತ್ತಾನೆ. ಆದರೆ ಯುವತಿಯ ಸ್ನೇಹಿತ ಹಾಗೂ ಕಳ್ಳನ ನಡುವೆ ಗಲಾಟೆ ನಡೆಯುತ್ತದೆ, ಈ ಗಲಾಟೆಯಲ್ಲಿ ಆಕೆಯ ಸ್ನೇಹಿತನಿಗೆ ಚಾಕುವಿನಿಂದ ಚುಚ್ಚಲು ಹೋಗಿ ತನಗೇ ಚುಚ್ಚಿಕೊಂಡು, ಬಳಿಕ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿರುವ ಘಟನೆ ವೈರಲ್ ಆಗಿದೆ.