ಕಾರವಾರ (ಉತ್ತರ ಕನ್ನಡ): 8 ವಿಜ್ಞಾನಿಗಳನ್ನು ಹೊಂದಿದ್ದ ಸಂಶೋಧನಾ ಹಡಗನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಾಫಿಗೆ ಸೇರಿದ ಆರ್.ವಿ.ಸಿಂಧು ಸಾಧನಾ ಎಂಬ ಸಂಶೋಧನಾ ಹಡಗಿನ ರಕ್ಷಣೆ ಮಾಡಲಾಗಿದೆ. ಹಡಗಿನ ಎಂಜಿನ್ ಕೆಟ್ಟು ಗೋಕರ್ಣದಿಂದ ಸುಮಾರು 40 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಮುಳುಗುವ ಆತಂಕದಲ್ಲಿತ್ತು. 8 ವಿಜ್ಞಾನಿಗಳು ಹಾಗೂ ಹಡಗಿನ ಸಿಬ್ಬಂದಿ ಸೇರಿ ಒಟ್ಟು 36 ಜನರು ಈ ಹಡಗಿನಲ್ಲಿದ್ದರು.