ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಯಡಿಯೂರಪ್ಪ ಕುಟುಂಬ ಬಗ್ಗೆ ಹಲವಾರು ಕಾರಣಗಳಿಗೆ ತೀವ್ರ ಅಸಮಾಧಾನ ಇರಬಹುದು. ಅವರು ಒಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷನ ವಿರುದ್ಧ ಹೀಗೆ ಸಾರ್ವಜನಿಕವಾಗಿ, ಮಠಾಧೀಶರ ಮುಂದೆ ಒಂದೇ ಸಮನೆ ಟೀಕೆ ಆರೋಪಗಳನ್ನು ಮಾಡಿತ್ತಿರುವುದು ಪಕ್ಷದ ವರ್ಚಸ್ಸಿಗೆ ತುಂಬಾ ಕ್ಷತಿಯನ್ನುಂಟು ಮಾಡುತ್ತಿದೆ.ಮುಂದೆ ರಾಜ್ಯಾಧ್ಯಕ್ಷನಿಗೆ ಯಾರೂ ಬೆಲೆ ಕೊಡಲಾರದಂಥ ಸ್ಥಿತಿ ನಿರ್ಮಾಣವಾದರೆ ಆಶ್ಚರ್ಯವಿಲ್ಲ.