ಆಡೂರು ಪಿಹೆಚ್​ಸಿಯ ನರ್ಸ್ ಜ್ಯೋತಿ

ಯಾಕೆ ಹೀಗೆ ಮಾಡಿದ್ದು, ಫೆವಿಕ್ವಿಕ್ ಏನು, ಅದನ್ನು ಯಾವ ಕೆಲಸಕ್ಕೆ ಬಳಸಲಾಗುತ್ತದೆ ಅಂತ ನಿಮಗೆ ಗೊತ್ತಿಲ್ಲವೇ ಅಂತ ಬಾಲಕನ ಸಂಬಂಧಿಯೊಬ್ಬರು ಕೇಳಲು ಹೋದರೆ ಜ್ಯೋತಿ ಮೇಡಂ ಅವರದ್ದು ಡೆವಿಲ್ ಮೇ ಕೇರ್ ಅಟಿಟ್ಯೂಡ್! ಸಣ್ಣಪುಟ್ಟ ಗಾಯಗಳಿಗೆಲ್ಲ ತಾನು ಫೆವಿಕ್ವಿಕ್ ಬಳಸಿಯೇ ಟ್ರೀಟ್ಮೆಂಟ್ ನೀಡೋದು ಅನ್ನುತ್ತಾಳೆ. ಇಲ್ಲಿನ ಮೆಡಿಕಲ್ ಆಫೀಸರ್, ಹಾನಗಲ್ ಎಡಿಹೆಚ್​ಒ ಮತ್ತು ಹಾವೇರಿ ಡಿಹೆಚ್​ಒ ಜ್ಯೋತಿ ವಿರುದ್ಧ ಕ್ರಮ ಜರುಗಿಸದಿದ್ದರೆ ಆಸ್ಪತ್ರೆಗೆ ಬರುವ ರೋಗಿಗಳ ಜೀವಕ್ಕೆ ಕುತ್ತಾಗಲಿದ್ದಾಳೆ.