ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ

ದೇಶದ ಹಲವು ಭಾಗಗಳಲ್ಲಿ ಚಂದ್ರ ದರ್ಶನ ದೃಢಪಟ್ಟಿದ್ದು ಇಂದು ದೇಶಾದ್ಯಂತ ರಂಜಾನ್​ ಹಬ್ಬದ ಆಚರಿಸಲಾಯಿತು. ಇದರೊಂದಿಗೆ ಪವಿತ್ರ ರಂಜಾನ್​ ತಿಂಗಳು ಮುಗಿದು ಶವ್ವಾಲ್ ತಿಂಗಳ ಪ್ರಾರಂಭವಾಗಿದೆ. 30 ದಿನಗಳ ಉಪವಾಸದ ನಂತರ ಮುಸ್ಲಿಮರು ಈದ್​ ಉಲ್​ ಫಿತ್​ರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಈದ್ ಉಲ್ ಫಿತ್​​ರ್ ಹಬ್ಬ ಆಚರಿಸಿಕೊಳ್ಳುತ್ತಿರುವ ಮುಸ್ಲಿಮರು ಪರಸ್ಪರ ಶುಭ ಹಾರೈಸಿದರು.