‘ಯಾವ ಕೆಲಸ ಮಾಡೋಕೂ ನಾನು ರೆಡಿ’: ವಾಣಿಜ್ಯ ಮಂಡಳಿ ಚುನಾವಣೆ ಕುರಿತು ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ

ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಪ್ರಮೀಳಾ ಜೋಶಾಯ್​ ಅವರು ನಂತರ ನಾಯಕಿಯಾಗಿಯೂ ಅಭಿನಯಿಸಿದರು. ಚಿತ್ರರಂಗದಲ್ಲಿ ಅವರಿಗೆ 50 ವರ್ಷಗಳ ಅನುಭವ ಇದೆ. ಈಗ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಲಾಯಿತು. ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ‘ನಾನು ಯಾವ ಕೆಲಸ ಮಾಡೋಕೂ ರೆಡಿ. ಚಿತ್ರರಂಗದ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಸಾಕಷ್ಟು ಅನುಭವ ಇದೆ. ಏನು ಬಂದರೂ ನಾನು ಎದುರಿಸೋಕೆ ಸಿದ್ಧ. ಪ್ರತಿಭಟನೆಗಳು ನಡೆದಾಗ ನಮ್ಮ ಕುಟುಂಬದವರು ಭಾಗಿ ಆಗಿದ್ದೇವೆ’ ಎಂದು ಪ್ರಮೀಳಾ ಜೋಶಾಯ್​ ಹೇಳಿದ್ದಾರೆ. ತಾವು ಯಾವ ರೀತಿ ಕೆಲಸ ಮಾಡುತ್ತೇವೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.