ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೊಡಿಭಾಗ್ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ್ ಕಲ್ಪಿಸಲು ಕಾಳಿ ನದಿಗೆ ಕಟ್ಟಿರುವ ಸೇತುವೆ ಕಳೆದ ಆಗಸ್ಟ್ 6 ರ ಮಧ್ಯರಾತ್ರಿ ಕುಸಿದಿತ್ತು. ಈ ವೇಳೆ ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಸತತ ಕಾರ್ಯಚರಣೆ ಮೂಲಕ ರಕ್ಷಣಾ ಸಿಬ್ಬಂದಿಗಳು ಇಂದು ಮೇಲಕ್ಕೆತ್ತಿದ್ದಾರೆ.