ಕೊಲೆ ಕೇಸ್​ನಲ್ಲಿ 11 ವರ್ಷ ಜೈಲು ಶಿಕ್ಷೆ ಹಾಗೂ ದರ್ಶನ್​ ಭೇಟಿ ಬಗ್ಗೆ ಖೈದಿ ಹೇಳಿದ್ದೇನು?

ಪ್ರಸಿದ್ಧ ನಟ ದರ್ಶನ್​ ಅವರು ರೇಣುಕಾಸ್ವಾಮಿಯ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರನ್ನು ಇನ್ನೋರ್ವ ಖೈದಿ ಭೇಟಿ ಮಾಡಿದ್ದಾರೆ. ಹೌದು, ಕೊಲೆ ಕೇಸ್​ನಲ್ಲಿ 11 ವರ್ಷ ಜೈಲು ವಾಸ ಅನುಭವಿಸಿ ಬಂದಿರುವ ತುರುವನೂರು ಸಿದ್ದಾರೂಢ ಅವರು ಜೈಲಿನಲ್ಲಿ ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಆ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಅವರು ಎಕ್ಸ್​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ. ‘ಕರಿಯ’ ಸಿನಿಮಾದ ಶೂಟಿಂಗ್​ ನೋಡಿದ್ದ ಅವರು ಆ ಬಳಿಕ ಜೈಲಿಗೆ ಹೋಗಿದ್ದರು. ಜೈಲು ಶಿಕ್ಷೆ ಮುಗಿಸಿ ಹೊರಗೆ ಬರುವುದಕ್ಕೂ ಮುನ್ನ ಜೈಲಿನಲ್ಲಿ ದರ್ಶನ್​ ಅವರನ್ನು ನೋಡಿದ್ದರ ಕುರಿತು ಅನುಭವವನ್ನು ತುರುವನೂರು ಸಿದ್ದಾರೂಢ ಹಂಚಿಕೊಂಡಿದ್ದಾರೆ.