ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳು ಕೂಡ ಚರ್ಚೆ ಹುಟ್ಟು ಹಾಕುತ್ತಿವೆ. ಆರಂಭದಲ್ಲಿ ಅವರು ಸೈಲೆಂಟ್ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ತಮ್ಮ ಬುದ್ಧಿವಂತಿಕೆ ಏನು ಎಂಬುದನ್ನು ತೋರಿಸಲು ಶುರು ಮಾಡಿದರು. ಈಗಂತೂ ಬಿಗ್ ಬಾಸ್ ಆಟದಲ್ಲಿ ಡ್ರೋನ್ ಪ್ರತಾಪ್ ಪಳಗಿದ್ದಾರೆ. ಅವರ ಕೆಲವು ವರ್ತನೆಯಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಕ್ಯಾಪ್ಟೆನ್ಸಿ ಟಾಸ್ಕ್ಗೆ ನಮ್ರತಾ ಆಟ ಆಡಬಾರದು ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ. ಆದರೆ ಅದಕ್ಕೂ ಮುನ್ನ ನಮ್ರತಾ ಬಗ್ಗೆ ಅವರು ಹೊಗಳಿಕೆಯ ಮಾತುಗಳನ್ನು ಆಡಿದ್ದರು. ಅವರ ಈ ಸ್ಟ್ರಾಟಜಿಯಿಂದ ನಮ್ರತಾ ಗೌಡ ಸಖತ್ ಬೇಸರಗೊಂಡಿದ್ದಾರೆ. ಡ್ರೋನ್ ಪ್ರತಾಪ್ ತಮಗೆ ಈ ರೀತಿ ಮೋಸ ಮಾಡಬಾರದಿತ್ತು ಎಂದು ಅವರು ಕಣ್ಣೀರು ಹಾಕಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ನ.28ರ ರಾತ್ರಿ 9.30ಕ್ಕೆ ಈ ಸಂಚಿಕೆ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಲೈವ್ ನೋಡುವ ಅವಕಾಶ ಇದೆ.