ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸುಧೀರ್​ ಸಂತಾಪ

ಹಿರಿಯ ನಟ ಸರಿಗಮ ವಿಜಿ ಅವರು ಅನಾರೋಗ್ಯದಿಂದ ನಿಧನರಾಗಿದ್ದು, ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದಿದ್ದಾರೆ. ಸರಿಗಮ ವಿಜಿ ಜೊತೆ ಸುಧೀರ್​ ಕುಟುಂಬದವರು ಆಪ್ತವಾಗಿದ್ದರು. ನಿರ್ದೇಶಕ ತರುಣ್ ಸುಧೀರ್​ ಅವರು ಭಾವುಕವಾಗಿ ಮಾತನಾಡಿದ್ದಾರೆ. ಸರಿಗಮ ವಿಜಿ ಜೊತೆ ತಮಗೆ ಇದ್ದ ಒಡನಾಟವನ್ನು ತರುಣ್ ಸುಧೀರ್​ ನೆನಪಿಸಿಕೊಂಡಿದ್ದಾರೆ.