ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ನಿರ್ಣಯದ ವಿರುದ್ಧ ಅಂಜುಮನ್ ಕಮಿಟಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಕಮಿಟಿಗೆ ಸಿದ್ದರಾಮಯ್ಯ ಸರ್ಕಾರದ ಕುಮ್ಮಕ್ಕಿತ್ತು. ನ್ಯಾಯಲಯವು, ಈದ್ಗಾ ಮೈದಾನ ಕಮಿಟಿಯ ಸ್ವತ್ತಲ್ಲ ಅದು ಪಾಲಿಕೆಗೆ ಸೇರಿದ ಆಸ್ತಿ, ಕಮಿಟಿ ವರ್ಷಕ್ಕೆ ಎರಡು ಬಾರಿ ಅನುಮತಿ ಪಡೆದು ಪ್ರಾರ್ಥನೆ ಸಲ್ಲಿಸಬಹುದಷ್ಟೇ ಅಂತ ತೀರ್ಪು ನೀಡಿದೆ.