ಆನೆಗಳಿಗೆ ಕನಿಷ್ಠ 50 ದಿನಗಳ ತರಬೇತಿ ನೀಡಬೇಕಿರುವುದರಿಂದ ಅವುಗಳ ಆಯ್ಕೆ ಎರಡು ತಿಂಗಳು ಮೊದಲು ಶುರುವಾಗುತ್ತದೆ ಎಂದು ಪ್ರಭುಗೌಡ ಹೇಳುತ್ತಾರೆ. ಶಿಬಿರಗಳಿಂದ ಆಯ್ದ ಆನೆಗಳನ್ನು ಮೈಸೂರಿಗೆ ತಂದು ಆರೋಗ್ಯ ತಪಾಸಣೆ ಮಾಡಲಾಗುತ್ತದೆ, ಹೆಣ್ಣಾನೆಗಳ ಗರ್ಭಧರಿಸಿವೆಯಾ ಅನ್ನೋದನ್ನು ಪಶುವೈದ್ಯರು ಟೆಸ್ಟ್ ಮಾಡುತ್ತಾರೆ, ಸಿಡಿಮದ್ದಿನ ಶಬ್ದದಿಂದ ಹೆಣ್ಣಾನೆ ವಿಚಲಿತಗೊಂಡು ಗರ್ಭಾವಸ್ಥೆ ಮೇಲೆ ಪರಿಣಾಮ ಬೀರಬಾರದು ಎಂದು ಅರಣ್ಯಾಧಿಕಾರಿ ಹೇಳುತ್ತಾರೆ.