ಆರೋಪಿ ಮೋಜಾ ಅಲಿಯಾಸ್ ಮಧುವನ್ನು ಸೆರೆ ಹಿಡಿಯಲು ಹೋದ ವೇಳೆ, ಎನ್ಇಪಿಎಸ್ ಠಾಣೆಯ ಮಹಿಳಾ ಪೊಲೀಸ್ ಮಂಗಳಮ್ಮ ಮುಂದೆ ಡ್ರ್ಯಾಗರ್ ಹಿಡಿದು ಪುಂಡಾಟವಾಡಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ಮಹಿಳಾ ಪೊಲೀಸ್ ಮುಂದೆ ಹುಚ್ಚಾಟವಾಡಿದ್ದಾನೆ. ಕೊನೆಗೆ ಪೊಲೀಸರು ಹರಸಾಹಸಪಟ್ಟು ಆರೋಪಿಯನ್ನು ಹಿಡಿಯಲು ಯಶಸ್ವಿಯಾದರು.