ಸಿಎಂ ಸಿದ್ದರಾಮಯ್ಯ ವಾಹನಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಕಾರು ವಿರುದ್ಧ ದಿಕ್ಕಿನಲ್ಲಿ ಬಂದಿರುವಂತಹ ಘಟನೆ ನಿನ್ನೆ ರಾತ್ರಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸಿಬಿಎಸ್ ವೃತ್ತದಲ್ಲಿ ನಡೆದಿದೆ. ಈ ವೇಳೆ ಸ್ವತಃ ಜನಾರ್ದನ ರೆಡ್ಡಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಟ್ರಾಫಿಕ್ ಜಾಮ್ ಆಗಿದ್ದರಿಂದ ರೆಡ್ಡಿ ಕಾರ್ ಚಾಲಕ ಡಿವೈಡರ್ ಹತ್ತಿಸಿದ್ದಾರೆ.