ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿದ ಹೆಚ್.ಡಿ.ರೇವಣ್ಣಗೆ ಕೊನೆಗೂ ರಿಲೀಫ್ ಸಿಕ್ಕಿದೆ. ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ರೇವಣ್ಣಗೆ ಜಾಮೀನು ಸಿಕ್ಕಿದೆ. ಜಾಮೀನು ಸಿಕ್ಕರೂ ಇವತ್ತು ರೇವಣ್ಣ ಇಂದು ಬಿಡುಗಡೆ ಆಗಲ್ಲ. ಬದಲಿಗೆ ನಾಳೆ ರಿಲೀಸ್ ಆಗಲ್ಲಿದ್ದಾರೆ. ಅತ್ತ ಹೆಚ್.ಡಿ.ರೇವಣ್ಣಗೆ ಜಾಮೀನು ಸಿಗುತ್ತಿದ್ದಂತೆ ಇತ್ತ ಹೊಳೆನರಸೀಪುರದ ಮಹಾತ್ಮ ಗಾಂಧಿ ಸರ್ಕಲ್ನಲ್ಲಿ ಅಭಿಮಾನಿಗಳು ರೇವಣ್ಣ ಪರ ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.