ಬೆಂಗಳೂರಿನ ಸೌತ್​ ಎಂಡ್​ ಸರ್ಕಲ್​ ಕಂದಾಯ ಕಚೇರಿಗೆ ಡಿಕೆ ಶಿವಕುಮಾರ್​ ಭೇಟಿ

ಇಂದು ಸಿಟಿ ರೌಂಡ ಹಾಕಿರುವ ಡಿಸಿಎಂ ಡಿಕೆ ಶಿವಕುಮಾರ್​ ಬೆಂಗಳೂರಿನ ಸೌತ್​ ಎಂಡ್​ ಸರ್ಕಲ್​ ಕಂದಾಯ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಎಸ್.ಪಿ.ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ್ದು, ರಸ್ತೆಯ ಸ್ಥಿತಿ‌ ನೋಡಿ ಬಿಬಿಎಂಪಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡುವಂತೆ ಡಿಕೆ ಶಿವಕುಮಾರ್​ ಸೂಚನೆ ನೀಡಿದ್ದಾರೆ.