ಹುಲಿ ಬೇಟೆಗೆ ಬಲಿಯಾದ ಜಿಂಕೆ ಮರಿ!

ಹುಲಿಯೊಂದು ಜಿಂಕೆ ಮರಿಯನ್ನು ಬೇಟೆಯಾಡಿದ ಅಪರೂಪದ ದೃಶ್ಯ ಹೆಚ್​​ಡಿ ಕೋಟೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಕಾಣಿಸಿದ್ದು, ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರು, ನೀರು ಕುಡಿಯಲು ಬಂದ ಹುಲಿ ಜಿಂಕೆ ಮರಿಯನ್ನು ಬೇಟೆಯಾಡಿದ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ.