ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ

ಬಹಿರಂಗವಾಗಿ ಹೇಳಿಕೆ ನೀಡದಿರುವುದು ಹೇಡಿತನ ಅಂತ ಭಾವಿಸುವುಸದಿಲ್ಲ, ಹಾಗೆ ಹೇಳಿಕೆ ನೀಡುವುದನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ, ಅದರೆ ಪಕ್ಷದಲ್ಲಿ ಸುಧಾರಣೆ ತರಲು ಕೆಲವು ಸಲ ಅಶಿಸ್ತನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಈಶ್ವರಪ್ಪ ಹೇಳಿದರು. ಪಕ್ಷವನ್ನು ಕಟ್ಟಿದ ಶ್ರೇಯಸ್ಸು ಬೇರೆ ಮಹಾನುಭಾವರಿಗೆ ಸಲ್ಲುತ್ತದೆ, ಅದನ್ನು ಬೆಳೆಸಲು ತಾವು ಶ್ರಮಿಸಿದ್ದಾಗಿ ಅವರು ಹೇಳಿದರು.