‘ಜೈಲರ್​’ ಹಿಟ್​ ಆದ್ಮೇಲೆ ಪರಭಾಷೆಯಿಂದ ಶಿವಣ್ಣ ಪಡೆದ ಸಿನಿಮಾ ಆಫರ್​ ಒಂದಲ್ಲ ಎರಡಲ್ಲ

2023ರ ವರ್ಷ ಶಿವರಾಜ್​ಕುಮಾರ್​ ಅವರ ಪಾಲಿಗೆ ತುಂಬ ವಿಶೇಷವಾಗಿದೆ. ರಜನಿಕಾಂತ್​ ಜೊತೆ ಶಿವಣ್ಣ ನಟಿಸಿದ ‘ಜೈಲರ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ಆ ಚಿತ್ರದಲ್ಲಿ ಶಿವರಾಜ್​ಕುಮಾರ್​ ಮಾಡಿದ್ದು ಅತಿಥಿ ಪಾತ್ರವಾದರೂ ಅದಕ್ಕೆ ಸಿಕ್ಕ ರೆಸ್ಪಾನ್ಸ್​ ಬಹಳ ದೊಡ್ಡದು. ‘ಜೈಲರ್​’ ಚಿತ್ರದ ಯಶಸ್ಸಿನ ಬಳಿಕ ಅವರಿಗೆ ಪರಭಾಷೆಯಿಂದ ಹಲವು ಆಫರ್​ಗಳು ಬರುತ್ತಿವೆ. ಪರಭಾಷೆಯಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವಂತೆ ದೊಡ್ಡ ದೊಡ್ಡ ನಿರ್ದೇಶಕರು ಬಂದು ಕೇಳಿಕೊಳ್ಳುತ್ತಿದ್ದಾರೆ. ಆ ಎಲ್ಲ ವಿಷಯದ ಬಗ್ಗೆ ಶಿವರಾಜ್​ಕುಮಾರ್​ ಮಾತನಾಡಿದ್ದಾರೆ. ಈಗ ಅವರ ‘ಘೋಸ್ಟ್​’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಿಡುಗಡೆ ಪ್ರಯುಕ್ತ ‘ಟಿವಿ 9 ಕನ್ನಡ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಶಿವಣ್ಣ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.